News

Click Here to Submit Your Article

9 ವರ್ಷಗಳ ನಂತರ 'ಮುಫ್ತಿ' ಮೂಲಕ ಛಾಯಾಸಿಂಗ್ ಕನ್ನಡಕ್ಕೆ ಮರು ಎಂಟ್ರಿ

ಬೆಂಗಳೂರು: ಶ್ರೀಮುರುಳಿ ಅಭಿನಯದ ಮುಫ್ತಿ ಸಿನಿಮಾದಲ್ಲಿ ಹಿರಿಯ ನಟ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವುದು ಪ್ರೇಕ್ಷಕರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ. ಹಾಗೆಯೇ ಕನ್ನಡ ಪ್ರಸಿದ್ಧ ನಟಿ ಛಾಯಾಸಿಂಗ್ ಕೂಡ ಮುಫ್ತಿ ಮೂಲಕ ಮರು ಎಂಟ್ರಿ ಪಡೆಯುತ್ತಿದ್ದಾರೆ.
2008 ರಲ್ಲಿ ಛಾಯಾಸಿಂಗ್ ಕೊನೆಯದಾಗಿ ಕನ್ನಡ ಸಿನಿಮಾದಲ್ಲಿ ನಟಿಸಿದ್ದರು. ಅದಾದ ನಂತರ ಅವರು ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ,
ಮುಫ್ತಿಯಲ್ಲಿನ ಪಾತ್ರದ ಬಗ್ಗೆ ಛಾಯಾಸಿಂಗ್ ಹೆಚ್ಚಿನ ಮಾಹಿತಿ ಬಹಿರಂಗ ಪಡಿಸಿಲ್ಲ, ಆದರೆ ಪ್ರಮುಖ ಪಾತ್ರ ಛಾಯಾ ನಟಿಸುತ್ತಿದ್ದಾರೆ, ಈಗಾಗಲೇ ಮುಫ್ತಿ ಶೂಟಿಂಗ್ ನಲ್ಲಿ ಛಾಯಾ ಸಿಂಗ್ ಭಾಗವಹಿಸಿದ್ದಾರೆ.
ಸಿನಿಮಾದಲ್ಲಿ ಸಾನ್ವಿ ಶ್ರೀವಾಸ್ತವ, ಹಾಗೂ  ವಿಲನ್ ರೋಲ್ ನಲ್ಲಿ ವಶಿಷ್ಟ ಸಿಂಹ ನಟಿಸಿದ್ದಾರೆ.

ತಾರಕ್' ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸಾಂಗ್ ಟೀಸರ್ ಟ್ರೆಂಡ್ ಆರಂಭ

ಬೆಂಗಳೂರು: ಸಿನಿಮಾ ಟೀಸರ್ ಗಳ ನಂತರ ಸ್ಯಾಂಡಲ್ ವುಡ್ ನಲ್ಲಿ ಹೊಸದೊಂದು ಟ್ರೆಂಡ್ ಆರಂಭವಾಗಿದೆ, ಅರ್ಜುನ್ ಜನ್ಯ ತಾರಕ್ ಸಿನಿಮಾ ಮೂಲಕ ಸಾಂಗ್ ಟೀಸರ್ ರಿಲೀಸ್ ಮಾಡಿದ್ದಾರೆ.
ಪ್ರಕಾಶ್ ಜಯರಾಂ ನಿರ್ದೇಶನದ ತಾರಕ್ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಆಡಿಯೋ ಬಿಡುಗಡೆಗೂ ಮುನ್ನ ಸಾಂಗ್ ನ ಟೀಸರ್ ರಿಲೀಸ್ ಮಾಡಿದ್ದಾರೆ. ದರ್ಶನ್ 49ನೇ ಸಿನಿಮಾವಾದ ತಾರಕ್ ನಲ್ಲಿ ಶೃತಿ ಹರಿಹರನ್ ಮತ್ತು ಸಾನ್ವಿ ಶ್ರೀವಾತ್ಸವ್ ನಾಯಕಿಯರಾಗಿ ನಟಿಸಿದ್ದಾರೆ. ಸಾಂಗ್ ಟೀಸರ್ ಆನ್ ಲೈನ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ.
ಸಾಂಗ್ ಟೀಸರ್ ಬಿಡುಗಡೆ ಮಾಡುವುದರಿಂದ ಕೇಳುಗರಲ್ಲಿ ಹೆಚ್ಚಿನ ಕುತೂಹಲ ಮೂಡಿಸುತ್ತದೆ. ಹಿಗಾಗಿ ಪೂರ್ಣ ಹಾಡು ಕೇಳಲು ಉತ್ಸುಕರಾಗಿರುತ್ತಾರೆ ಎಂದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹೇಳಿದ್ದಾರೆ.

ಭ್ರಷ್ಟಾಚಾರದಿಂದ ಸ್ವಾತಂತ್ರ್ಯ ಪಡೆಯುವವರೆಗೂ ಗುಲಾಮರಾಗಿರುತ್ತೇವೆ: ಕಮಲ್ ಹಾಸನ್

ಭ್ರಷ್ಟಾಚಾರದಿಂದ ಮುಕ್ತವಾಗದೆ ಭಾರತೀಯರು ನಿಜವಾದ ಸ್ವಾತಂತ್ರ್ಯವನ್ನು ಹೊಂದಲು ಸಾಧ್ಯವಿಲ್ಲ ಎಂದು ಖ್ಯಾತ ನಟ ಕಮಲ್ ಹಾಸನ್ ಅಭಿಪ್ರಾಯಪಟ್ಟಿದ್ದಾರೆ.
ಭ್ರಷ್ಟಾಚಾರದಿಂದ ಸ್ವಾತಂತ್ರ್ಯ ಸಿಗದೆ ನಾವಿನ್ನೂ ಗುಲಾಮರಾಗಿದ್ದೇವೆ. ಒಂದು ಹೊಸ ಸ್ವಾತಂತ್ರ್ಯ ಚಳವಳಿಗೆ ಧೈರ್ಯ ಮತ್ತು ಪ್ರತಿಜ್ಞೆ ಮಾಡುವವರು ಬಂದರೆ ನಾವು ಗೆಲ್ಲುತ್ತೇವೆ ಎಂದು ಕಮಲ್ ಹಾಸನ್ ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ಅವರು, ಉತ್ತಮ ತಮಿಳು ನಾಡು ರಾಜ್ಯ ನನ್ನ ಧ್ಯೇಯವಾಗಿದೆ. ನನ್ನ ಧ್ವನಿಗೆ ಧ್ಯೈರ್ಯ ತುಂಬುವವರು ಯಾರಿದ್ದಾರೆ? ಡಿಎಂಕೆ, ಎಐಎಡಿಎಂಕೆ ಮತ್ತು ಇತರ ರಾಜಕೀಯ ಪಕ್ಷಗಳು ನನಗೆ ಸಹಾಯ ಮಾಡುವ ಯಂತ್ರಗಳಾಗಿವೆ. ಆ ಉಪಕರಣಗಳು ಮೊಂಡಾಗಿದ್ದರೆ ಬೇರೆ ಹುಡುಕಬೇಕು ಎಂದರು.

saps ibu bapa

                                                                                    Beritasemasa.Com.My

Saps ibu bapa

Master Sekolah Makin Tertekan, Migrain. Punca? Pelajar, Pentadbir, Beban Kerja atau Ibu Bapa? (Kemaskini terkini pada: Aug 7, 2017) Master Sekolah Makin Tertekan, Migrain. Punca? Pelajar, Pentadbir, Beban Kerja atau Ibu Bapa?

ಯುದ್ಧೋತ್ಸಾಹಿ ಚೀನಾಗೆ ಭಾರತ ಟಾಂಗ್: ಹೆಚ್ಚುವರಿ ಶಸ್ತ್ರಾಸ್ತ್ರ ಖರೀದಿಗೆ ಸಿದ್ಧತೆ!

ನವದೆಹಲಿ: ಡೊಕ್ಲಾಂ ವಿವಾದ ಸಂಬಂಧ ಭಾರತ ಮತ್ತು ಚೀನಾ ನಡುವಿನ ಸಂಘರ್ಷ ತಾರಕಕ್ಕೇರಿರುವಂತೆಯೇ ಇತ್ತ ಸೇನೆ ರಕ್ಷಣಾ ಇಲಾಖೆ ತ್ವರಿತವಾಗಿ ಶಸ್ತ್ರಾಸ್ತ್ರ ಖರೀದಿಗೆ ಹೆಚ್ಚುವರಿ 20 ಸಾವಿರ ಕೋಟಿ, ರುಗಳಿಗೆ ಕೇಂದ್ರ ಸರ್ಕಾರದ ಬಳಿ ಬೇಡಿಕೆ ಇಟ್ಟಿದೆ.

ಡೊಕ್ಲಾಂ ಸಂಘರ್ಷ: ಕೋಲ್ಕತಾದಲ್ಲಿ ನಡೆಯಬೇಕಿದ್ದ ಚೀನಾದ ಒಬೋರ್ ವಿಚಾರ ಸಂಕಿರಣ ರದ್ದು!

ಕೋಲ್ಕತಾ:
"ಬಿಆರ್‌ಐ, ಬಿಸಿಐಎಂ ಆ್ಯಂಡ್‌ ರೋಲ್‌ ಆಫ್ ಈಸ್ಟರ್ನ್ ಇಂಡಿಯಾ" ಹೆಸರಿನ ವಿಚಾರ ಸಂಕಿರಣ ಇದಾಗಿದ್ದು, ಇದನ್ನು ಚೀನಾ ರಾಯಭಾರ ಕಚೇರಿ ಆಗಸ್ಟ್10ರಂದು ಕೋಲ್ಕತಾದಲ್ಲಿ ಹಮ್ಮಿಕೊಂಡಿತ್ತು. ಚೀನಾದ ಸಿಪೆಕ್‌  ಕಾರಿಡಾರ್‌ನಿಂದ ಕೋಲ್ಕತಾ ಮೂಲಕ ಬಾಂಗ್ಲಾದೇಶ, ಮ್ಯಾನ್ಮಾರ್‌ಗೆ ಸಂಪರ್ಕ ಕಲ್ಪಿಸುವ ಯೋಜನೆ ಕುರಿತ ವಿಚಾರ ಸಂಕಿರಣ ಇದಾಗಿತ್ತು.
ಆದರೆ ಭಾರತ ಮತ್ತು ಚೀನಾ ದೇಶಗಳ ನಡುವಿನ ಗಡಿ ಬಿಕ್ಕಟ್ಟು ತಾರಕಕ್ಕೇರಿರುವ ಹಿನ್ನಲೆಯಲ್ಲಿ ಈ ಮಹತ್ವಾಕಾಂಕ್ಷಿ ವಿಚಾರ ಸಂಕಿರಣ ದಿಢೀರ್ ರದ್ದಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕೋಲ್ಕತಾದಲ್ಲಿರುವ ಚೀನಾ ರಾಯಭಾರ  ಕಚೇರಿ ಅಧಿಕಾರಿಗಳು "ಅನಿವಾರ್ಯ ಕಾರಣಗಳಿಂದ ವಿಚಾರ ಸಂಕಿರಣ ರದ್ದುಗೊಳಿಸಲಾಗಿದೆ" ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Top 5 hints for picking corporate Diwali blessings

Diwali is a celebration of bliss, lights and family times. It is the time when you crave fulfilling your family and demonstrating to them your appreciation. When we discuss organizations and organizations, for them additionally Diwali is an opportunity to be praised with accomplices, representatives, customers and other individuals who add to the association.

Artificial Intelligence Chip For iPhone

Apple is allegedly chipping away at joining an AI contribute its leader iPhones. Referred to inside as the Apple Neural Engine the chip is intended to do assignments, for example, facial acknowledgment, discourse acknowledgment et cetera. Google a year ago had declared a devoted AI chip called the Tensor Processing Unit (TPU). The chip is right now being utilized to process list items and different capacities, for example, picture preparing. Another rendition of this chip is probably going to made accessible for cloud business soon.

Importance Of Transport Insurance During Moving And Shifting

Welfare of stuffs and items is always your concern point when you are relocating somewhere. Living with an entity from more than 5 years you create some memories and good time with it. Your feelings and emotions are attached to them. No matter there are still useful or not but still many from you persons prefer to keep them near to you because you still feel there are precious to you #‪‪Shashi Tharoor‬, ‪Sunanda Pushkar‬, ‪Arnab Goswami‬, ‪Indian National Congress.

ಡೋಕ್ಲಾಮ್ ಚೀನಾಗೆ ಸೇರಿದ್ದು: ಉಲ್ಟಾ ಹೊಡೆದ ಭೂತಾನ್?

ಬೀಜಿಂಗ್: ವಿವಾದಿತ ಡೋಕ್ಲಾಮ್ ಪ್ರದೇಶ ಸಂಬಂಧ ಒಂದೆಡೆ ಭೂತಾನ್'ಗೆ ಬೆಂಬಲ ವ್ಯಕ್ತಪಡಿಸಿ ಭಾರತ ಚೀನಾ ರಾಷ್ಟ್ರವನ್ನು ಎದುರು ಹಾಕಿಕೊಳ್ಳುತ್ತಿದ್ದರೆ, ಮತ್ತೊಂಡೆದೆ ಡೋಕ್ಲಾಮ್ ಪ್ರದೇಶ ಚೀನಾಗೆ ಸೇರಿದೆ ಎಂದು ಖುದ್ದು ಭೂತಾನ್ ರಾಷ್ಟ್ರವೇ ದೃಢೀಕರಿಸಿದೆ ಎಂದು ಚೀನಾದ ರಾಜತಾಂತ್ರಿಕ ಅಧಿಕಾರಿಣಿ ವಾಂಗ್ ವೆನ್ಲಿ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.
ಡೋಕ್ಲಾಮ್ ವಿವಾದ ಸಂಬಂಧ ಭಾರತೀಯ ಪತ್ರಕರ್ತರ ಜೊತೆಗೆ ಮಾತನಾಡಿರುವ ಅವರು, ವಿವಾದಿತ ಡೋಕ್ಲಾಮ್ ಪ್ರದೇಶವು ತನಗೆ ಸೇರಿದ್ದಲ್ಲ ಎಂದು ಸ್ವತಃ ಭೂತಾನ್ ರಾಷ್ಟ್ರವೇ ರಾಜತಾಂತ್ರಿಕ ಮಾರ್ಗದ ಮೂಲಕ ಮಾಹಿತಿ ನೀಡಿದೆ ಎಂದು ಹೇಳಿದ್ದಾರೆ. ಆದರೆ, ಈ ಸಂಬಂಧ ಯಾವುದೇ ದಾಖಲೆಗಳನ್ನು ನೀಡಿಲ್ಲ ಎಂದು ತಿಳಿಸಿದ್ದಾರೆ.

ಐಟಿ ದಾಳಿಗೂ ಮೊದಲು ಮತ್ತು ನಂತರ ನಡೆದದ್ದನ್ನು ಹೇಳಿದರೆ ಆಗಬಾರದ್ದೆಲ್ಲಾ ಆಗುತ್ತದೆ: ಡಿಕೆಶಿ

ಬೆಂಗಳೂರು: ಇಂಧನ ಸಚಿವ ಡಿ.ಕೆ.ಶಿವಕುಮಾರ್ ನಿನ್ನೆ ಹೊಸದೊಂದು ಕುತೂಹಲದ ಬಾಂಬ್ ಸಿಡಿಸಿದ್ದಾರೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡುವ ಮೊದಲು ಮತ್ತು ನಂತರ ಏನೆಲ್ಲಾ ನಡೆಯಿತು ಎಂಬುದನ್ನು ಹೇಳಿದರೆ ಆಗಬಾರದ್ದೆಲ್ಲಾ ಆಗುತ್ತದೆ, ವಿಷಯ ಎಲ್ಲೆಲ್ಲಿಗೋ ಹೋಗುತ್ತದೆ, ಅದರ ಪರಿಣಾಮ ಜೋರಾಗಬಹುದು ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.
ಪಕ್ಷಕ್ಕೆ ಸೇರಿಕೊಳ್ಳುವಂತೆ ಬಿಜೆಪಿ ಆಹ್ವಾನ ನೀಡಿತ್ತೇ ಎಂದು ಸುದ್ದಿಗಾರರು ಕೇಳಿದಾಗ  ಡಿ.ಕೆ.ಶಿವಕುಮಾರ್ ಈ ರೀತಿ ಉತ್ತರಿಸಿದರು.

ಸ್ಟಂಟ್ ವೇಳೆ ಬಲಗೈ ಮುರಿದಿದ್ದರೂ ಶೂಟಿಂಗ್ ಮುಂದುವರಿಸಿದ ನಟ ನಿರೂಪ್ ಭಂಡಾರಿ!

ಬೆಂಗಳೂರು: ರಂಗಿತರಂಗ ನಟ ನಿರೂಪ್ ಭಂಡಾರಿ ರಾಜರಥ ಸಿನಿಮಾ ಚಿತ್ರೀಕರಣದ ವೇಳೆ ತಮ್ಮ ಬಲ ಗೈ ಮುರಿದುಕೊಂಡು ಗಾಯಗೊಂಡಿದ್ದಾರೆ. ಹೀಗಿದ್ದರೂ ಅವರು ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.
ತಮ್ಮ ಸಹೋದರ್ ಅನೂಪ್ ಭಂಡಾರಿ ನಿರ್ದೇಶಿಸುತ್ತಿರುವ ರಾಜರಥ ಸಿನಿಮಾ ಸ್ಟಂಟ್ ಸನ್ನಿವೇಶದ ಚಿತ್ರೀಕರಣ ವೇಳೆ ಗಾಯಗೊಂಡಿದ್ದಾರೆ.
ಊಟಿಯಲ್ಲಿ ನಾಲ್ಕು ದಿನಗಳ ಚಿತ್ರೀಕರಣ ಮುಗಿದಿದ್ದು, ಚಿತ್ರ ತಂಡ ಸದ್ಯ ಮೈಸೂರಿನಲ್ಲಿ ಕ್ಯಾಂಪ್ ಹೂಡಿದ್ದು , ಅಂತಿಮ ಹಂತದ ಶೂಟಿಂಗ್ ನಡೆಯುತ್ತಿದೆ. ಮೊದಲೇ ನಿರ್ಧರಿಸಿದ ಶೆಡ್ಯೂಲ್ ನಂತೆ ಶೂಟಿಂಗ್ ನಡೆಯಬೇಕೆಂದು ನಿರ್ಧರಿಸಿರುವ ನಿರೂಪ್ ತಮಗೆ ಗಾಯವಾಗಿದ್ದರೂ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.

ಇಂದಿನ ದಿನಗಳಲ್ಲಿ ದೇಶಭಕ್ತಿಯ ಉತ್ಸಾಹ ಬರೀ ಸಾಮಾಜಿಕ ಮಾಧ್ಯಮಗಳಲ್ಲಿ: ಪ್ರಣೀತಾ ಸುಭಾಷ್

ಬೆಂಗಳೂರು: ನಾನು ಉತ್ತಮ ಗುಣಮಟ್ಟದ ಸಿನಿಮಾಗಳಿಗೆ ಆದ್ಯತೆ ನೀಡುತ್ತೇನೆಯೇ ಹೊರತು ಸಿನಿಮಾ ಸಂಖ್ಯೆಗಳಿಗಲ್ಲ ಎಂದು ನಟಿ ಪ್ರಣೀತಾ ಸುಭಾಷ್ ಹೇಳಿದ್ದಾರೆ.
ಸದ್ಯ ಶಿವರಾಜಾ ಕುಮಾರ್ ಅಭಿನಯದ ಮಾಸ್ ಲೀಡರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಕ್ರೆಡಿಟ್ ನಟರಾದ ವಿಜಯ್ ರಾಘವೇಂದ್ರ, ಯೋಗಿ, ಗುರುರಾಜ್ ಜಗ್ಗೇಶ್ ಮತ್ತು ಶರ್ಮಿಳಾ ಮಾಂಡ್ರೆ ಹಾಗೂ ವಂಶಿ ಕೃಷ್ಣ ಅವರಿಗೆ ಸಲ್ಲಿಸಿದ್ದಾರೆ.
ಮಾಸ್ ಲೀಡರ್ ಸಿನಿಮಾದಲ್ಲಿ ನನ್ನ ಪಾತ್ರ ಸೇರಿ ಪ್ರತಿಯೊಂದು ಪಾತ್ರಕ್ಕೂ ಹೆಚ್ಚಿನ ಮಹತ್ವವಿದೆ. ಸಿನಿಮಾದಲ್ಲಿ ನಟ ಶಿವರಾಜ್ ಕುಮಾರ್ ಅವರ ಜೊತೆ ಪ್ರೀತಿ, ಪ್ರೇಮ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.

ರಿಯಾಲಿಟಿ ಶೋಗೆ ಗುಡ್ ಬೈ: ಬಿಗ್ ಬಾಸ್'ಗೇ ನಟ ಕಮಲ್ ಹಾಸನ್ ಎಚ್ಚರಿಕೆ!

ಚೆನ್ನೈ: ಬಿಗ್'ಬಾಸ್ ರಿಯಾಲಿಟಿ ಶೋದಲ್ಲಿ ನಿಯಮ ಮೀರಿದ ಸ್ಪರ್ಧಾಳುಗಳಿಗೆ ಆಗೋಚರ ಬಿಸ್ ಬಾಸ್ ಎಚ್ಚರಿಕೆ ನೀಡುವುದು ಸಾಮಾನ್ಯ. ಆದರೆ, ತಮಿಳು ಆವೃತ್ತಿಯಲ್ಲಿ ಬಿಗ್ ಬಾಸ್'ಗೇ ಕಾರ್ಯಕ್ರಮದ ನಿರ್ವಾಹಕ, ನಟ ಕಮಲ್ ಹಾಸನ್ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗೆ ಸ್ಪರ್ಧಾಳುಗಳಿಗೆ ವಿಕಲಾಂಗದ ರೀತಿ ವರ್ತಿಸುವ ಟಾಸ್ಕ್ ನೀಡಲಾಗಿತ್ತು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಇನ್ನೊಮ್ಮೆ ಇಂತ ಸಂವೇದನಾರಹಿತ ಟಾಸ್ಕ್ ನೀಡಿದರೆ ತಕ್ಷಣವೇ ಶೋದಿಂದ ಹೊರಗೆ ಹೋಗುವುದಾಗಿ ಬಿಗ್ ಬಾಸ್ ಗೆ ಕಮಲ್ ಇಂಥಹದ್ದೊಂದು ಎಚ್ಚರಿಕೆ ನೀಡಿದ್ದಾರೆ.

Pages

Subscribe to RSS - News